Endultra Technologyt Advertisement
Uncategorized

ಜಗದೀಶ್ ಶೇಣವನಿಗೆ ಪ್ರತೀಕಾರವೇ ಮುಖ್ಯವಾಗಿದ್ದರೆ ತನ್ನ ಮಕ್ಕಳನ್ನು ಬಲಿಕೊಡಲಿ ಹೊರತು ಅಮಾಯಕ ಹಿಂದೂಗಳನ್ನಲ್ಲ!!!. – – – ರಿಯಾ‌ಝ್ ಫರಂಗಿಪೇಟೆ

ಮಂಗಳೂರು28: ಕರಾವಳಿ ಜಿಲ್ಲೆಗಳಲ್ಲಿ ಕೋಮು ಹಿಂಸಾಚಾರದಿಂದಾಗಿ ಅಮಾಯಕ ಜೀವಗಳು ಬಲಿಯಾಗುತ್ತಿರುವುದನ್ನು  ಪ್ರತಿಯೊಬ್ಬ ನಾಯಕರು ಕೂಡಾ ಖಂಡಿಸ ಬೇಕಾಗಿರುವುದು
ಮಾನವೀಯ ಧರ್ಮವಾಗಿರುತ್ತದೆ.ಆದರೆ ವಿಹಿಂಪ ನ ಜಿಲ್ಲಾಧ್ಯಕ್ಷ ಜಗದೀಶ ಶೇಣವನಿಗೆ ಮಾತ್ರ ಇಂತಹ ಕೊಲೆಗಳ ಮೂಲಕ “ಕೇಸರಿ ಪ್ರತೀಕಾರ”ವನ್ನು ಮಾಡುವ ಸಮಾಜ ಘಾತುಕರಿಗೆ ರಕ್ಷಣೆಯನ್ನು ನೀಡುವುದು ಹೆಮ್ಮೆಯ ವಿಚಾರವಾಗಿ ಕಂಡಿರುವುದು ಅವನ ಅತ್ಯಂತ ಅಸಹ್ಯವಾದ ಮನಸ್ಥಿತಿಯನ್ನು ತೋರ್ಪಡಿಸುತ್ತದೆ. ಆದ್ದರಿಂದಲೇ ಸಂಘ ಪರಿವಾರದ ಪ್ರಾಯೋಜಕತ್ವದಲ್ಲಿ ಮುಸ್ಲಿಂ ಕಿಡಿಗೇಡಿಗಳು ನಡೆಸಿದ ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ  ಅಮಾಯಕ ಬಶೀರ್ ರನ್ನು ಕೊಲೆ ಮಾಡಿರುವುದು ತಪ್ಪಲ್ಲ ಎಂದು ಹೇಳುವ ಮೂಲಕ ಬಶೀರ್ ರವರ ಹತ್ಯೆಯನ್ನು ಸಮರ್ಥಿಸಿಕೊಂಡಿರುತ್ತಾನೆ. ಇವನಿಗೆ ಅಷ್ಟೊಂದು ಪ್ರತೀಕಾರದ ರಕ್ತದ ಚಪಲ ಇದ್ದರೆ ತನ್ನ ಮಕ್ಕಳನ್ನು ಬಲಿಕೊಟ್ಟು ತನ್ನ ಧರ್ಮ ರಕ್ಷಣೆಯ ಉತ್ತುಂಗತೆಯನ್ನು ಸಾಬೀತು ಪಡಿಸಲಿ ಹೊರತು ಅಮಾಯಕ ಹಿಂದೂಗಳನ್ನು ಉದ್ರೇಕಿಸಿಕೊಂಡು ಬಲಿ ಕೊಡುವ ರಾಜಕೀಯ ಮಾಡುವುದನ್ನು ನಿಲ್ಲಿಸಲಿ ಎಂದು ರಿಯಾ‌ಝ್ ಫರಂಗಿಪೇಟೆಯವರು ಮಂಗಳೂರಿನಲ್ಲಿ ಪತ್ರಿಕಾ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸುತ್ತಾ ತಿಳಿಸಿದರು. ಈ ಮೊದಲು ಮುಸಲ್ಮಾನರ ಕೈ ಕಡಿಯುತ್ತೇವೆ ಎಂಬ ಹೇಳಿಕೆಯನ್ನು ನೀಡಿದ್ದಾಗಲೇ ಸರ್ಕಾರ ಮತ್ತು ಪೋಲೀಸ್ ಇಲಾಖೆ ಕಾನೂನಿನ ಬಿಸಿ ಮುಟ್ಟಿಸಿದ್ದರೆ ಈ ರೀತಿಯ ಹೇಳಿಕೆಗಳು ಬರುತ್ತಾ ಇರಲಿಲ್ಲ.ಜಗದೀಶ ಶೇಣವನ ಈ ಹೇಳಿಕೆಯನ್ನು ಗಮನಿಸಿದರೆ ಪ್ರತೀಕಾರಕ್ಕಾಗಿ ಬಶೀರ್ ರವರ ಹತ್ಯೆಯನ್ನು ಖುದ್ದಾಗಿ ಮಾಡಿಸಿರುವುದಾಗಿ ಮೇಲ್ನೋಟಕ್ಕೆ ಸಾಬೀತು ಗೊಳ್ಳುವುದರಿಂದ ಬಶೀರ್ ಕೊಲೆ ಪ್ರಕರಣದಲ್ಲಿ ಜಗದೀಶ್ ಶೇಣವನನ್ನು ಪ್ರಮುಖ ಆರೋಪಿಯಾಗಿ ಪರಿಗಣಿಸಿ  ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಈ ಮೊದಲು ಬೇರೆ ಕಾರಣಗಳಿಂದ ಜಗದೀಶ್ ಶೇಣವನಿಗೆ ನೀಡಿರುವ ಪೋಲಿಸ್ ಭದ್ರತೆಯನ್ನು ತೆರವುಗೊಳಿಸಬೇಕೆಂದು ರಿಯಾ‌ಝ್ ಫರಂಗಿಪೇಟೆಯವರು ಆಗ್ರಹಿಸಿರುತ್ತಾರೆ.

Facebook Comments
Click to comment

Leave a Reply

Your email address will not be published. Required fields are marked *

Most Popular

Endultra Technologyt Advertisement
To Top
WhatsApp Join WhatsApp Group