Endultra Technologyt Advertisement
Crime

ಕರ್ನಾಟಕದಲ್ಲಿ ಗೋವಿನ ಹೆಸರಿನಲ್ಲಿ ಗುಂಪು ಹಿಂಸಾ ಹತ್ಯೆಯನ್ನು ತಡೆಯಲು ನಮ್ಮ ಜೀವ ಪಣಕ್ಕಿಟ್ಟಾದರೂ ಪ್ರತಿರೋಧಿಸುತ್ತೇವೆ – ರಿಯಾಝ್ ಫರಂಗಿಪೇಟೆ

ಕರ್ನಾಟಕದಲ್ಲಿ ಗೋವಿನ ಹೆಸರಿನಲ್ಲಿ ಗುಂಪು ಹಿಂಸಾ ಹತ್ಯೆಯನ್ನು ತಡೆಯಲು ನಮ್ಮ ಜೀವ ಪಣಕ್ಕಿಟ್ಟಾದರೂ ಪ್ರತಿರೋಧಿಸುತ್ತೇವೆ – ರಿಯಾಝ್ ಫರಂಗಿಪೇಟೆ

ಆಗಸ್ಟ್ 18, ತುಮಕೂರು: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹೃದಯಭಾಗದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ “ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ” ಎಂಬ ರಾಷ್ಟ್ರೀಯ ಅಭಿಯಾನದ ಸಾರ್ವಜನಿಕ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿಯವರಾದ ಮುಹಮ್ಮದ್ ರಿಯಾಝ್‍ರವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತ ದೇಶದಲ್ಲಿ ಆರ್‍ಎಸ್‍ಎಸ್ ನವರು ಮತ್ತು ಬಿಜೆಪಿಯವರು ದೇಶದಲ್ಲಿ ನಡೆಸಿರುವ ಗುಂಪು ಹಿಂಸಾ ಹತ್ಯೆಯಿಂದಾಗಿ 31ಮಂದಿ ಮುಸಲ್ಮಾನರು ಮತ್ತು 8ಮಂದಿ ದಲಿತರರು ಹತರಾಗಿರುತ್ತಾರೆ. ಇದರಲ್ಲಿ ಕರ್ನಾಟಕದ ಕುಂದಾಪುರದ ಪ್ರವೀಣ್ ಪೂಜಾರಿಯವರು ಈ ಭಯೋತ್ಪಾದಕ ಗೋರಾಕ್ಷಸರಿಂದ ಹತ್ಯೆಯಾಗಿರುವುದು ಗೊಭಯೋತ್ಪಾದಕರ ಧರ್ಮಾಂಧತೆ ಎಷ್ಟು ಭೀಕರವಾಗಿದೆ ಎಂಬುವುದನ್ನ್ನು ತೋರಿಸುತ್ತದೆ. ಉತ್ತರ ಭಾರತದಲ್ಲಿ ಅತಿಯಾಗಿ ನಡೆಯುತ್ತಿದ್ದ ಗೋವಿನ ಹೆಸರಿನಲ್ಲಿ ನಡೆಯುತ್ತಿರುವ ಗುಂಪು ಹಿಂಸಾ ಹತ್ಯೆಯು ಈಗ ಕರ್ನಾಟಕಕ್ಕೂ ಕಾಲಿಟ್ಟದ್ದು ಇದು ಪ್ರವೀಣ್ ಪೂಜಾರಿಯ ಹತ್ಯೆಯೇ ಕೊನೆಯಾಗಬೇಕು. ಯಾವುದೇ ಕಾರಣಕ್ಕೂ ಗೋವಿನ ಹೆಸರಿನಲ್ಲಿ ಇನ್ನೊಂದು ಹತ್ಯೆಯು ಕರ್ನಾಟಕದಲ್ಲಿ ನಡೆಯಲು ಬಿಡುವುದಿಲ್ಲ ನಮ್ಮ ಜೀವ ಪಣಕ್ಕಿಟ್ಟಾದರೂ ಅಮಾಯಕರನ್ನು ರಕ್ಷಿಸುತ್ತೇವೆ ಎಂದು ಅವರು ಹೇಳಿದರು.
ಗೋವಿನ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಭೀಕರ ಹತ್ಯೆಯ ಅಸಹನೀಯ ಘಟನೆಗಳು ನಡೆಯುತ್ತಿರುವ ಸಂಧರ್ಭದಲ್ಲಿ ಕೂಡಾ ಮುಸ್ಲಿಂ ಧರ್ಮ ಗುರುಗಳು ಬಿಜೆಪಿಯ ಎಮ್.ಆರ್.ಎಮ್ ವೇದಿಕೆಯಲ್ಲಿ ಗುರುತಿಸಿಕೊಳ್ಳೂವುದಾದರೆ ಅವರೆಲ್ಲರೂ ಕೂಡಾ ಪರೋಕ್ಷವಾಗಿ ಮಹಮ್ಮದ್ ಅಖ್ಲಾಕ್, ಪೆಹ್ಲೂಖಾನ್, ಜುನೈದ್ ಮತ್ತು ಇತರ ಮುಸಲ್ಮಾನರ ಹತ್ಯೆಯನ್ನು ಬೆಂಬಲಿಸಿದಂತಾಗುತ್ತದೆ ಎಂದು ಅವರು ತಿಳಿಸಿದರು. ಆದ್ದರಿಂದ ಸರ್ವ ಮುಸ್ಲಿಂ ಬಾಂಧವರು ಮಾನವೀಯತೆಯ ವಿರೋಧಿಯಾದ ಆರ್‍ಎಸ್‍ಎಸ್ ಮತ್ತು ಬಿಜೆಪಿಯ ಸಹ ಸಂಘಟನೆಗಳಿಂದ ದೂರ ಇದ್ದುಕೊಂಡು ಈ ದೇಶವನ್ನು ಕಟ್ಟಬೇಕಾಗಿದೆ ಎಂದರು.

ಈ ರಾಷ್ಟ್ರೀಯ ಅಭಿಯಾನದ ಸಮಾರೋಪ ದಿನವಾದ ಆಗಸ್ಟ್ 25ರಂದು ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿರುವ “ಮನೆಯಿಂದ ಹೊರಗೆ ಬನ್ನಿ” ಎಂಬ ಜನ ಐಕ್ಯಮತ ಮಾನವಸರಪಳಿ ಕಾರ್ಯಕ್ರಮದಲ್ಲಿ ಎಲ್ಲರೂ ಕೂಡ ಮನೆಯ ಮಹಿಳಯರು, ಮಕ್ಕಳು ಮತ್ತು ವೃದ್ಧರ ಸಮೇತ ಮನೆಯಿಂದ ಹೊರಗೆ ಬಂದು ಗುಂಪು ಹಿಂಸಾ ಹತ್ಯೆಯ ಬಲಿಪಶುಗಳಿಗೆ ನ್ಯಾಯ ದೊರಕಿಸಲು ಹಾಗೂ ಪೋಲಿಸ್, ನ್ಯಾಯಾಲಯ ಮತ್ತು ಸರಕಾರಗಳ ಕಣ್ಣು ತೆರೆಸಲು ಎಸ್.ಡಿ.ಪಿ.ಐ ಯೊಂದಿಗೆ ಕೈಜೋಡಿಸಬೇಕಾಗಿ ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ ತುಮಕೂರು ಜಿಲ್ಲಾಧ್ಯಕ್ಷರಾದ ಶಬೀರ್ ಅಹಮದ್‍ರವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ನೂರುದ್ದೀನ್ ಬೆಂಗಳೂರು, ದಲಿತ ಸಂಘರ್ಷ ಸಮಿತಿಯ ಶಿರಾ ತಾಲೂಕು ಸಂಚಾಲಕರಾದ ರಂಗನಾಥ್‍ರವರು ಭಾಗವಹಿಸಿದ್ದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷರಾದ ಮೆಹಬೂಬ್ ತುಮಕೂರು, ಎಸ್.ಡಿ.ಪಿ.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಖ್ತಿಯಾರ್ ಅಹ್ಮದ್, ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಉಮ್ರುದ್ದೀನ್ ಮತ್ತು ಸ್ಥಳೀಯ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Gathering during the public meet at Tumkur City

Facebook Comments
Click to comment

Leave a Reply

Your email address will not be published. Required fields are marked *

Most Popular

Endultra Technologyt Advertisement
To Top
WhatsApp Join WhatsApp Group