Endultra Technologyt Advertisement
Crime

ಕೇವಲ ಪದಕದ ಆಸೆಗೋಸ್ಕರ ಮುಸ್ಲಿಂ ಸಂಘಟನೆಯ ನಾಯಕರನ್ನು ಶರತ್ ಕೊಲೆ ಪ್ರಕರಣದಲ್ಲಿ ಸಿಲುಕಿಸಿದರೇ ಐಜಿಪಿ ಹರಿಶೇಖರನ್? -ರಿಯಾಝ್ ಫರಂಗಿಪೇಟೆ

ಕೇವಲ ಪದಕದ ಆಸೆಗೋಸ್ಕರ ಮುಸ್ಲಿಂ ಸಂಘಟನೆಯ ನಾಯಕರನ್ನು ಶರತ್ ಕೊಲೆ ಪ್ರಕರಣದಲ್ಲಿ ಸಿಲುಕಿಸಿದರೇ ಐಜಿಪಿ ಹರಿಶೇಖರನ್?
-ರಿಯಾಝ್ ಫರಂಗಿಪೇಟೆ

IGP Harishekharan, did you implicate leaders of Muslim Organization in Sharat murder case for Medal?

ಕಳೆದ ಕೆಲವು ಸಮಯದ ಹಿಂದೆ ಶರತ್ ಮಡಿವಾಳ ಎಂಬ ಆರ್.ಎಸ್.ಎಸ್ ಯುವಕನ ಕೊಲೆ ಪ್ರಕರಣದಲ್ಲಿ ಕೊನೆಗೂ ಮುಸ್ಲಿಂ ಸಂಘಟನೆಯ ನಾಯಕರನ್ನು ಸಿಲುಕಿಸುವುದರಲ್ಲಿ ದ.ಕ. ಜಿಲ್ಲೆಯ ಪೋಲಿಸರು ಯಶಸ್ವಿಯಾಗಿದ್ದಾರೆ. ಕೊಲೆ ಪ್ರಕರಣದಲ್ಲಿ ಸಜಿಪದ ಮಹಮ್ಮದ್ ಶಾಫಿ ಮತ್ತು ಚಾಮರಾಜನಗರ ಜಿಲ್ಲೆಯ ಪಾಪ್ಯುಲರ್ ಫ್ರಂಟ್‍ನ ಜಿಲ್ಲಾಧ್ಯಕ್ಷ ಮತ್ತು ಆರ್.ಟಿ.ಐ ಕಾರ್ಯಕರ್ತ ಖಲೀಲುಲ್ಲಾರನ್ನು ಆರೋಪಿಗಳೆಂದು ಘೋಷಿಸಲಾಗಿದೆ ಮತ್ತು ಅವರನ್ನು ಪೋಲಿಸ್ ಬಂಧನದಲ್ಲಿರಿಸಲಾಗಿರುತ್ತದೆ. ಇವರಲ್ಲಿ ಮಹಮ್ಮದ್ ಶಾಫಿಯವರನ್ನು 10 ದಿನಗಳ ಹಿಂದೆಯೇ ಬಂಧಿಸಲಾಗಿದ್ದರೂ ಪತ್ರಿಕಾಗೋಷ್ಠಿಯಲ್ಲಿ ಐಜಿಪಿಯವರು ಒಂದು ದಿನದ ಹಿಂದೆ ಬಂಧಿಸಲಾಗಿದೆ ಎಂದು ತಿಳಿಸಿರುತ್ತಾರೆ. ಆದರೆ ಮಹಮ್ಮದ್ ಶಾಫಿಯ ಕುಟುಂಬಸ್ಥರು ಆಗಸ್ಟ್ 9 ರಂದು ಮತ್ತು ಎಸ್.ಡಿ.ಪಿ.ಐ ಜಿಲ್ಲಾ ಸಮಿತಿಯು ಆಗಸ್ಟ್ 12ರಂದು ಪತ್ರಿಕಾ ಗೋಷ್ಠಿ ನಡೆಸಿ ಬಂಧನದ ಹಾಗೂ ಪೋಲಿಸ್ ಕಿರುಕುಳ ನೀಡಿರುವ ಬಗ್ಗೆ ಖಚಿತಪಡಿಸಿರುತ್ತಾರೆ.

ಇನ್ನು ಚಾಮರಾಜನಗರ ಜಿಲ್ಲೆಯ ಆರ್.ಟಿ.ಐ ಕಾರ್ಯಕರ್ತ, ಪಾಪ್ಯುಲರ್ ಫ್ರಂಟ್‍ನ ಜಿಲ್ಲಾಧ್ಯಕ್ಷರಾದ ಖಲೀಲುಲ್ಲಾ ಇವರನ್ನು ಆಗಸ್ಟ್ 13ರಂದು ಮಧ್ಯಾಹ್ನ ಚಾಮರಾಜನಗರದಲ್ಲಿ ವಶಕ್ಕೆ ಪಡೆದುಕೊಂಡು ಅವರನ್ನು ಮಂಗಳೂರಿಗೆ ಕರೆತರುವ ಮೊದಲೇ ಸಂಜೆ 4.00ಘಂಟೆಗೆ ಐಜಿಪಿಯವರು ಪತ್ರಿಕಾಗೋಷ್ಠಿ ನಡೆಸಿ ಆರೋಪಿಗಳ ಹೆಸರನ್ನು ಘೋಷಿಸುವುದರ ಹಿಂದಿನ ಔಚಿತ್ಯವಾದರೂ ಏನು? ಎಂಬುದನ್ನು ಸಾರ್ವಜನಿಕರು ಅರ್ಥಮಾಡಿಕೊಳ್ಳಬೇಕಾಗಿದೆ. ಅಂದರೆ ಖಲೀಲುಲ್ಲಾರವರ ಬಂಧನದ ನಂತರ ಯಾವುದೇ ತನಿಖೆಯನ್ನು ನಡೆಸುವುದಕ್ಕೆ ಮೊದಲೇ ಆರೋಪಿ ಎಂದು ಘೋಷಿಸಿರುವುದು ಐಜಿಪಿಯವರ ಪೂರ್ವಾಗ್ರಹ ಪೀಡಿತವಾದ ಮನೋಸ್ಥಿತಿಗೆ ಸಾಕ್ಷಿಯಾಗಿರುತ್ತದೆ.

ಶರತ್ ಕೊಲೆ ಪ್ರಕರಣದಲ್ಲಿ ಈ ಮಧ್ಯೆ ಮರಳು ಮಾಫಿಯಾ ಕೈವಾಡ ಮತ್ತು ವೈಯಕ್ತಿಕ ದ್ವೇಷದ ಕಾರಣಗಳ ಮಾತು ಕೇಳಿ ಬಂದಿದ್ದರೂ ಸಹ ದ.ಕ. ಜಿಲ್ಲೆಯ ಪೋಲಿಸರು ರಚಿಸಿದ 7 ತಂಡಗಳು ಕೂಡಾ ಪೂರ್ವಾಗ್ರಹ ಪೀಡಿತವಾಗಿ ಪಾಪ್ಯುಲರ್ ಫ್ರಂಟ್‍ನ ಸದಸ್ಯರನ್ನೇ ಕೇಂದ್ರೀಕೃತವಾಗಿ ತನಿಖೆಯನ್ನು ನಡೆಸುತ್ತಾ ಇದ್ದರು. ಈ ನಿಟ್ಟಿನಲ್ಲಿ ಬರೋಬ್ಬರಿ 60 ಮಂದಿ ಸದಸ್ಯರ ವಿಚಾರಣೆ ನಡೆದಿರುತ್ತದೆ. ಇದನ್ನು ಕಂಡರೆ ಈ ಪೋಲಿಸ್ ತಂಡಗಳಿಗೆ ಬಿ.ಜೆ.ಪಿಯಿಂದ ಆಮಿಷ ಮತ್ತು ಒತ್ತಡಗಳು ಬಂದಿರುವ ಬಗ್ಗೆ ಗುಮಾನಿ ಹುಟ್ಟುತ್ತದೆ. ಈ ಸಂದರ್ಭದಲ್ಲಿ ಶೋಭ ಕರಂದ್ಲಾಜೆಯ ಒತ್ತಡ ಮತ್ತು ಸುಳ್ಳು ವರದಿಯ ಹೇಳಿಕೆಯ ಬಗ್ಗೆ ನಾವು ಗಮನಹರಿಸಬೇಕಾಗಿದೆ ಹಾಗೂ ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರವರು ಕೂಡಾ ಇದೇ ಸಂಘಟನೆಯ ಹೆಸರನ್ನು ಬೊಟ್ಟು ಮಾಡಿದ್ದನ್ನು ಕಂಡರೆ ಇದೊಂದು ವ್ಯವಸ್ಥಿತವಾಗಿ ಹೆಣೆದಿರುವ ಷಡ್ಯಂತ್ರ ಎಂಬುದು ಬಹಳ ಸ್ಪಷ್ಟವಾಗಿ ಗೋಚರಿಸುತ್ತದೆ.

ನಮ್ಮ ಐಜಿಪಿ ಹರಿಶೇಖರನ್‍ರವರು ಆಗಸ್ಟ್ 13ರಂದು ದ.ಕ. ಜಿಲ್ಲೆಯಿಂದ ವರ್ಗಾವಣೆಗೊಂಡು ಜಿಲ್ಲೆಯಿಂದ ಹೊರ ನಡೆಯಬೇಕಾದ ಸಂದರ್ಭದಲ್ಲೇ ಆರೋಪಿಗಳ ಹೆಸರುಗಳನ್ನು ತರಾತುರಿಯಲ್ಲಿ ಘೋಷಿಸಿರುವುದನ್ನು ಕಂಡರೆ ಐಜಿಪಿ ಹರಿಶೇಖರನ್‍ರವರು ಒಬ್ಬ ಬಿಜೆಪಿಯ ಏಜೆಂಟ್ ನಂತೆ ಕಾರ್ಯ ನಿರ್ವಹಿಸಿದ್ದಾರೆ ಎಂದು ತಿಳಿದು ಬರುತ್ತದೆ. ಈ ಹಿಂದೆ ಬೆಂಗಳೂರಿನ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಹರಿಶೇಖರ್‍ರವರಿಗೆ ಅದೊಂದು ಸ್ಥಳೀಯ ಮಟ್ಟದ ಪುಡಾರಿಗಳ ವೈಯಕ್ತಿಕ ದ್ವೇಷದಲ್ಲಿ ನಡೆದಿರುವ ಕೊಲೆ ಎಂಬುದು ಗೊತ್ತಾಗಿದ್ದರೂ ಕೂಡಾ ಕೇವಲ ಬಿಜೆಪಿ ನಾಯಕರ ಅಣತಿಯ ಮೇರೆಗೆ ಪಾಪ್ಯುಲರ್ ಫ್ರಂಟ್‍ನ ಉನ್ನತ ನಾಯಕರನ್ನು ಕೊಲೆ ಪ್ರಕರಣದಲ್ಲಿ ಸೇರಿಸುವುದಕ್ಕೋಸ್ಕರ ಬೆಂಗಳೂರಿನ ಜಿಲ್ಲಾಧ್ಯಕ್ಷರನ್ನು ಆ ಪ್ರಕರಣದಲ್ಲಿ ಸೇರಿಸಲಾಗಿತ್ತು ಎಂಬುವುದು ಇಲ್ಲಿ ಗಮನಾರ್ಹವಾದ ವಿಚಾರ. ಇದಕ್ಕೆ ಪೂರಕವಾಗಿ ಹರಿಶೇಖರನ್‍ರವರು ಪದೇ ಪದೇ ಪತ್ರಿಕಾ ಗೋಷ್ಠಿಯಲ್ಲಿ ರುದ್ರೇಶ್ ಪ್ರಕರಣವನ್ನು, ಶರತ್ ಪ್ರಕರಣವನ್ನು ನಾನೇ ಪತ್ತೆ ಹಚ್ಚಿದೆ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ. ಪೋಲಿಸ್ ವ್ಯವಸ್ಥೆಯು ಒಂದು ಸಂಘಟಿತ ತಂಡವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಕೂಡ ಐಜಿಪಿಯವರ “ನಾನು” ಎಂಬ ಪದ ಬಳಕೆಯ ಹಿಂದಿನ ಮರ್ಮವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಒಟ್ಟಾರೆಯಾಗಿ ಶರತ್ ಮಡಿವಾಳರ ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸುವ ಉತ್ಸುಕತೆಯಲ್ಲಿದ್ದ ದ.ಕ. ಜಿಲ್ಲಾ ಪೋಲಿಸರ ಶ್ರಮಕ್ಕೆ ತಣ್ಣೀರೆರಚಿ ಇಬ್ಬರು ಅಮಾಯಕರನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಿರುವುದು ಅತ್ಯಂತ ಖೇದಕರವಾದ ವಿಚಾರ ಮತ್ತು ಖಂಡನೀಯ ವಾಗಿರುತ್ತದೆ.

ಬಹುಶಃ ಐಜಿಪಿ ಹರಿಶೇಖರನ್‍ರವರು ಸರಕಾರದಿಂದ ಕೊಡಮಾಡುವ ಗೌರವ ಪದಕದ ನಿರೀಕ್ಷೆಯಲ್ಲಿ ಈ ಪೂರ್ವಾಗ್ರಹ ಪೀಡಿತವಾದ ಕೆಲಸವನ್ನು ಮಾಡಿರಬಹುದು ಅಥವಾ ತನ್ನ ನಿವೃತ್ತಿಯ ಅವಧಿಯ ನಂತರ ಬಿಜೆಪಿ ಪಕ್ಷವನ್ನು ಸೇರಿಒಂದು ಎಂ.ಪಿ. ಆಗುವ ಕನಸನ್ನು ಹೊತ್ತುಕೊಂಡು ತನ್ನ ಖಾಕಿ ಸಮವಸ್ತ್ರಕ್ಕೆ ಐಜಿಪಿ ಹರಿಶೇಖರನ್ ರವರು ದ್ರೋಹ ಬಗೆದಿರುತ್ತಾರೆ ಎಂಬುದು ನನ್ನ ಅನಿಸಿಕೆಯಾಗಿರುತ್ತದೆ.

-ರಿಯಾಝ್ ಫರಂಗಿಪೇಟೆ

Facebook Comments
Click to comment

Leave a Reply

Your email address will not be published. Required fields are marked *

Most Popular

Endultra Technologyt Advertisement
To Top
WhatsApp Join WhatsApp Group