Endultra Technologyt Advertisement
Education

Ideology of a Personality Cannot be Murdered: BT Lalita Naik

ಫ್ಯಾಶಿಸಂಗೆ ಮನುಷ್ಯನನ್ನು ಸೈದ್ಧಾಂತಿಕವಾಗಿ ಕೊಲ್ಲಲು ಸಾಧ್ಯವಿಲ್ಲ : ಬಿ.ಟಿ ಲಲಿತಾ ನಾಯಕ್

Shimoga: ಫ್ಯಾಶಿಸಂಗೆ ಮನುಷ್ಯನ್ನು ದೈಹಿಕವಾಗಿ ಕೊಲ್ಲಬಹುದೇ ಹೊರತು ಸೈದ್ಧಾಂತಿಕವಾಗಿ ಕೊಲ್ಲಲು ಸಾಧ್ಯವಿಲ್ಲ ಅಲ್ಲದೆ ವಿದ್ಯಾರ್ಥಿಗಳು ಕೇವಲ ಶಾಲಾ ಕಾಲೇಜುಗಳಿಂದ ಕಲಿಯುವುದು ಮಾತ್ರವಲ್ಲ ಸಮಾಜದಿಂದಲೂ ಬಹಳ ಕಲಿಯಬೇಕಾಗಿದೆ. ಸಮಾಜದಲ್ಲಿ ಯಾರು ಕಣ್ಣೀರಿಡುತ್ತಾರೋ ಅವರ ಕಣ್ಣೀರಿಗೆ ಕಾರಣ ಹುಡುಕಿ ನ್ಯಾಯ ಕೊಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ಬಿ.ಟಿ ಲಲಿತಾ ನಾಯಕ್ ಅವರು ಗರ್ಲ್ಸ್ ಕಾನ್ಫರೆನ್ಸ್ ನಲ್ಲಿ ಮಾತನಾಡಿದರು.
ಅಸಹಿಷ್ಣುತೆಯನ್ನು ‘ಕೊನೆಗೊಳಿಸೋಣ, ಫ್ಯಾಶಿಸಂ ವಿರುದ್ಧ ಒಂದಾಗೋಣ’ ಎಂಬ ಘೋಷಣೆಯೊಂದಿಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ವತಿಯಿಂದ ಶಿವಮೊಗ್ಗದ ಮುಸ್ಲಿಮ್ ಹಾಸ್ಟೆಲ್ ಮೈದಾನದಲ್ಲಿ ಗರ್ಲ್ಸ್ ಕಾನ್ಫರೆನ್ಸ್ ಸಮಾವೇಶ ನಡೆಯಿತು. ರಾಷ್ಟ್ರೀಯ ಉಪಾಧ್ಯಕ್ಷರಾದ ಆತಿಯಾ ಫಿರ್ದೌಸ್ ಉದ್ಘಾಟಿಸಿ ಮಾತನಾಡಿ ಕ್ಯಾಂಪಸ್ ಫ್ರಂಟ್ ನ ರಾಷ್ಟ್ರವ್ಯಾಪ್ತಿ ನಡೆಸುತ್ತಿರುವ ಅಭಿಯಾನದಲ್ಲಿ ಕಳೆದ 5 ವರ್ಷದಲ್ಲಿ ಆಳಿದ ಸರ್ಕಾರವು ನೀಡಿದ ಯಾವುದೇ ಭರವಸೆಗಳನ್ನು ಪೂರೈಸಲಿಲ್ಲ ಆದುದರಿಂದ ಅವರ ಜುಮ್ಲಾಬಾಝನ್ನು ಜನತೆಯ ಮುಂದಿಡುತ್ತಾ ಮತ್ತೆ ಫ್ಯಾಶಿಸ್ಟರನ್ನು ಅಧಿಕಾರಕ್ಕೇರದಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದರು.
ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಮಾತನಾಡಿ ಜಗತ್ತಿನಲ್ಲಿ ಭಾರತ ದೇಶ ಅತ್ಯಂತ ಕೆಟ್ಟದಾಗಿ ಚಿತ್ರಣಗೊಳ್ಳುತ್ತಿದೆ ಅಲ್ಲದೆ ಒಬ್ಬ ಸಾಮಾನ್ಯ ವ್ಯಕ್ತಿಯೂ ಕೂಡಾ ದೇಶದ ಪ್ರಧಾನ ಮಂತ್ರಿಯನ್ನು ಸಾಮಾಜಿಕ ಜಾಲತಾಣದಲ್ಲಿ ದಿನನಿತ್ಯ ಟೀಕಿಸುತ್ತಿರಲು ಕಾರಣ ಅವರು ಒಪ್ಪಿಕೊಂಡ ಫ್ಯಾಶಿಸ್ಟ್ ಸಿದ್ಧಾಂತವಾಗಿದೆ ಅಲ್ಲದೆ ಇದರಿಂದ ಅವರ ಘನತೆಯೂ ಕೂಡಾ ಬೀದಿಪಾಲಾಗಿದೆ ಈ ನಿಟ್ಟಿನಲ್ಲಿ ಫ್ಯಾಶಿಸಂನ್ನು ಎದುರಿಸಲು ಕ್ಯಾಂಪಸ್ ಫ್ರಂಟ್‍ನ ವಿದ್ಯಾರ್ಥಿನಿಯರು ಹಮ್ಮಿಕೊಂಡ ಈ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು.ವುಮೆನ್ ಇಂಡಿಯಾ ಮೂವ್‍ಮೆಂಟ್ ರಾಜ್ಯಧ್ಯಕ್ಷೆ ಶಾಹಿದಾ ತಸ್ನೀಮ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಉಪಾಧ್ಯಕ್ಷೆ ಮುರ್ಶಿದಾ ಬಾನು ವಹಿಸಿದ್ದರು. ವೇದಿಕೆಯಲ್ಲಿ ರಾಷ್ಟ್ರೀಯ ಸಮಿತಿ ಸದಸ್ಯೆ ಮಿಸ್ರಿಯಾ ಎ.ಎಸ್ , ವರ್ಲ್ಡ್‌ ವುಮೆನ್ ಕರಾಟೆ ಫೆಡರೇಶನ್ ಸದಸ್ಯೆಯಾದ ಸಾನಿಯಾ ಸುಲ್ತಾನ ಹಾಗೂ ರಾಜ್ಯ ಉಪಾಧ್ಯಕ್ಷ ಆರಿಫ್ ಶಿವಮೊಗ್ಗ ಉಪಸ್ಥಿತರಿದ್ದರು.ಮುಫೀದಾ ರೆಹ್ಮಾನ್ ಸ್ವಾಗತಿಸಿದರು ಸಮೀನಾ ಕಸರ್ ಮತ್ತು ಸಾನಿಯ ನಿರೂಪಿಸಿ ಶಹೀನ್ ಬೇಗಂ ವಂದಿಸಿದರು.

Facebook Comments
Click to comment

Leave a Reply

Your email address will not be published. Required fields are marked *

Most Popular

Endultra Technologyt Advertisement
To Top
WhatsApp Join WhatsApp Group