Endultra Technologyt Advertisement
Religious

ಮಾಡನ್ನೂರಿನಲ್ಲಿ ನಾಳೆ “ಇಶಲ್ ನೂರ್” ಬಿಡುಗಡೆಗೆ

ಪುತ್ತೂರು29: ಮಾಡನ್ನೂರಿನಲ್ಲಿ ಅಂತ್ಯವಿಶ್ರಾಂತಿ ಹೊಂದುತ್ತಿರುವ ವಲಿಯುಲ್ಲಾಹಿ ರವರ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ವಿಜ್ರಂಭನೆಯಿಂದ ನಡೆಸಿಕೊಂಡುಬರುತ್ತಿರುವ ‘ಉರೂಸ್ ಮುಬಾರಕ್’ ಇದರ ಪ್ರಯುಕ್ತ ಮಾಡನ್ನೂರಿನ ಚರಿತ್ರೆಯನ್ನು ಸಾರುವ ಹಾಗೂ ವಲಿಯುಲ್ಲಾಹಿರವರ ಮಕ್’ಬರ ಕರಾಮತ್ತನ್ನು ಹೇಳುವ ಇಸ್ಲಾಮಿಕ್ ದಫ್ಫ್ ಬೀಟ್ ಶೈಲಿಯ ‘ಇಶಲ್ ನೂರ್’ ಅಲ್ಬಮ್ ನಾಳೆ ರಾತ್ರಿ ಮಾಡನ್ನೂರಿನಲ್ಲಿ ಬಿಡುಗಡೆಗೊಳ್ಳಲಿದೆ.

ಪ್ರಖ್ಯಾತ ‘ಝಮಾನ್ ಟೀಮ್ ಪುತ್ತೂರು’ ತಂಡ ಹೊರತರುತ್ತಿರುವ ಈ ‘ಇಶಲ್ ನೂರ್’ ಎಂಬ ಮದ್’ಹ್ ಹಾಡಿನಲ್ಲಿ ಕೇರಳ ಹಾಗೂ ಕರ್ನಾಟಕದ ಪ್ರಸಿದ್ದ ಗಾಯಕರು ಹಾಡಿ ಅಭಿನಯಿಸಿದ್ದಾರೆ.ಖ್ಯಾತ ವೀಡಿಯೋಗ್ರಾಫರ್ *ಇಸಾಕ್ ಬೆದ್ರಾಳ* ರವರ ಅದ್ಭುತ ಕ್ಯಾಮರ ಕೈಚಲಕದೊಂದಿಗೆ ಮಾಡನ್ನೂರಿನ ಶ್ರೇಷ್ಟತೆಯನ್ನು ನಾಡಿಗೆ ಸಾರುವ *ನಿಝಾಮ್ ಕೊಳಂಬೆ* ಯವರ ಅದ್ಬುತ ಸಾಹಿತ್ಯದೊಂದಿಗೆ ‘ಅಶ್ರಫ್ ಸವಣೂರು’ ಹಾಗೂ ‘ಅನ್ಸಾರ್ ಶಾಝ್’ ರವರು ನಿರ್ದೇಶಿಸಿರುವ ಈ ಆಲ್ಬಮ್ ನಲ್ಲಿ ವಿಶಿಷ್ಟ ರೀತಿಯ *ಎಂಟು* ಇಸ್ಲಾಮಿಕ್ ದಫ್ಫ್ ಶೈಲಿಯ ಮದ್’ಹ್ ಹಾಡುಗಳಿವೆ ಈ ಅಲ್ಬಮ್’ನ ಆಡಿಯೋ ನಿರ್ಮಾಣ ‘ಅಶ್ರಫ್ ಎಂ ಡಿ ದುಬೈ’.

ಕೇರಳ ಹಾಗೂ ಕರ್ನಾಟಕದ ಪ್ರಸಿದ್ದ ಗಾಯಕರಾದ ಶುಹೈಬ್ ಕಣ್ಣೂರು, ಸಾಧಿಕ್ ಅರಿಕ್ಕಾಡಿ, ಶರೀಫ್ ಬೆಳ್ಳಾರೆ, ಅಶ್ರಫ್ ಸವಣೂರು, ಅನ್ಸಾರ್ ಶಾಝ್ ಮಾಡಾವು, ಹಾರೀಸ್ ಮುಕ್ವೆ, ರಹೀಂ ಕಾವು, ನಝೀರ್ ಗ್ಯಾಲಕ್ಸಿ, ಶಾಹುಲ್ ಹಮೀದ್ ಪೈಝಿ ಮಾಡನ್ನೂರು,* ಒಟ್ಟು ಒಂಬತ್ತು ಗಾಯಕರು ತಮ್ಮ ಅದ್ಬುತ ಕಂಠಸಿರಿಯಿಂದ ದ್ವನಿಗೂಡಿಸಿದ ‘ಇಶಲ್ ನೂರ್’ ಅಲ್ಬಮ್ ನಾಳೆ ಮಾಡನ್ನೂರಿನ ಶಹೀದಿಯ್ಯಾ ನಗರದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಝಮಾನ್ ಪುತ್ತೂರು ತಂಡದ ಸಂಚಾಲಕರಾದ ಸಫ್ವಾನ್ ಕೂರತ್ ರವರು ತಿಳಿಸಿದ್ದಾರೆ… ತಿಳಿಸಿದ್ದಾರೆ.

Facebook Comments
Click to comment

Leave a Reply

Your email address will not be published. Required fields are marked *

Most Popular

Endultra Technologyt Advertisement
To Top
WhatsApp Join WhatsApp Group