Endultra Technologyt Advertisement
Society

ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಪ್ರವಾಸಿ ನಂದಾವರ ಇದರ ವತಿಯಿಂದ ಜನವರಿ 14 ರಂದು ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.

ಮಂಗಳೂರು7:ಪ್ರವಾಸಿ ನಂದಾವರ ಹಾಗೂ ಬ್ಲಡ್ ಡೋನರ್ಸ್ ಜಂಟಿ ಆಶ್ರಯದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ ಇವರ ಸಹಯೋಗದೊಂದಿಗೆ ಜನವರಿ,14,2018 ರಂದು ಸರಕಾರಿ ಶಾಲೆ ನಂದಾವರದಲ್ಲಿ ಬೃಹತ್ ರಕ್ತದಾನ ಶಿಬಿರವು ನಡೆಯಲಿದೆ.

?ರಕ್ತದಾನದ ಮಾಹಿತಿಗಳು: ರಕ್ತಕ್ಕೆ ಬೇರೆ ಪರ್ಯಾಯವಿಲ್ಲ.ಇಂದಿನವರೆಗೂ ರಕ್ತಕ್ಕೆ ಬದಲಿ ಸಂಯೋಜನೆಯನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ಕೃತಕ ರಕ್ತ ಇರುವುದಿಲ್ಲ.
?ನಮ್ಮ ಶರೀರ ಮಾತ್ರ ರಕ್ತವನ್ನು ಉತ್ಪಾದಿಸಬಲ್ಲದು ಮತ್ತು ಪೂರಕ ರಕ್ತವನ್ನು ರಕ್ತ ನಿಧಿಗಳಲ್ಲಿ ಕಾಯ್ದಿಡುವುದು ಸೂಕ್ತ ಮಾರ್ಗವಾಗಿದೆ.
?ರಕ್ತದಾನ ಜೀವ ಉಳಿಸುತ್ತದೆ. ಇದು “ಅತ್ಯುನ್ನತ’’ ಕ್ರಿಯೆ.
?ನಿಮಗೆ ರಕ್ತ ಬೇಕಾದಾಗ, ಯಾರಾದರೂ ನಿಮಗೆ ರಕ್ತ ದಾನ ಮಾಡದ್ದಲ್ಲಿ ನೀವು ಸಹ ಬೇರೊಬ್ಬರಿಗೆ ರಕ್ತದಾನ ಮಾಡುವುದು ನಿಮ್ಮ ಕರ್ತವ್ಯವಾಗಿದೆ.
?ನಮ್ಮ ಶರೀರವು 5000ಮಿ.ಲಿ. ರಕ್ತವನ್ನು ಹೊಂದಿದೆ ಮತ್ತು 350 ಮಿ.ಲಿ. ರಕ್ತವನ್ನು ಮಾತ್ರ ರಕ್ತದಾನದ ಸಮಯದಲ್ಲಿ ಪಡೆದುಕೊಳ್ಳಲಾಗುತ್ತದೆ.ಹೀಗೆ ದಾನ ಮಾಡಿದ ರಕ್ತವನ್ನು ನಿಯಮಿತವಾದ ಆಹಾರವನ್ನು ಸೇವಿಸುವುದರಿಂದ ಶರೀರವು ಮತ್ತೆ ಕೆಲವೇ ವಾರಗಳಲ್ಲಿ ಉತ್ಪಾದಿಸಿಕೊಳ್ಳುತ್ತದೆ.
?ಗಂಡಸರು ಒಮ್ಮೆ ರಕ್ತದಾನ ಮಾಡಿದ ನಂತರ ಮೂರು ತಿಂಗಳ ಅಂತರದಲ್ಲಿ ರಕ್ತದಾನ ಮಾಡಬಹುದು ಮತ್ತು ಮಹಿಳೆಯರು ನಾಲ್ಕು ತಿಂಗಳ ನಂತರ ರಕ್ತದಾನ ಮಾಡಬಹುದು.
?ಯಾರು ಹೆಚ್.ಐ.ವಿ. ಹೆಪಟೈಟಿಸ್ ಸಿ, ವಿ.ಡಿ ಅಥವಾ ಇತರೆ ರೋಗಗಳಿಂದ ಬಳಲುತ್ತಿರುವರೋ ಅಂತಹ ವ್ಯಕ್ತಿಯ ರಕ್ತವನ್ನು ರಕ್ತದಾನದ ವೇಳೆ ಪಡೆಯಲಾಗುವುದಿಲ್ಲ.

?ಯಾರು ರಕ್ತದಾನ ಮಾಡಬಹುದು?
?ನೀವು 18 ರಿಂದ 65 ವರ್ಷ ವಯಸ್ಸಿನವರಾಗಿರಬೇಕು.
?ನಿಮ್ಮ ತೂಕ 45 ಕೆ.ಜಿ. ಅಥವಾ ಅದಕ್ಕಿಂತ ಹೆಚ್ಚಿರಬೇಕು.
?ನಿಮ್ಮ ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶವು ಕನಿಷ್ಠ 12.5% ಗ್ರಾಂ ಇರಬೇಕು.
?ನೀವು ಈ ಹಿಂದೆ ರಕ್ತದಾನ ಮಾಡಿದವರಾಗಿದ್ದಲ್ಲಿ ಮತ್ತೆ ರಕ್ತದಾನ ಮಾಡಲು 3 ಅಥವಾ ಹೆಚ್ಚು ತಿಂಗಳುಗಳಾಗಿರಬೇಕು.
?ನೀವು ಆರೋಗ್ಯವಂತರಾಗಿದ್ದಲ್ಲಿ ಮಲೇರಿಯಾ, ಟೈಫಾಯ್ಡಿ ಅಥವಾ ಇತರೆ ಸೋಂಕು ಹರಡುವಂತಹ ರೋಗಗಳು ಇಲ್ಲವಾದದ್ದಲ್ಲಿ ಮಾತ್ರ ರಕ್ತದಾನ ಮಾಡಬಹುದು.

?ಯಾರು ರಕ್ತದಾನ ಮಾಡಬಾರದು?
ನೀವು ರಕ್ತದಾನ ಮಾಡಬಾರದು ಯಾಕೆಂದರೆ
?ಇತ್ತೀಚೆಗೆ ಯಾವುದಾದರೂ ಸೋಂಕಿನಿಂದ ಬಳಲುತ್ತಿದ್ದು ರೋಗ ನಿರೋಧಕಗಳನ್ನು ಮತ್ತು ಔಷಧಗಳನ್ನು ಬಳಸುತ್ತಿದ್ದಲ್ಲಿ.
?ನಾಲ್ಕು ವಾರಗಳಲ್ಲಿ ಯಾವುದಾದರೂ ಸೋಂಕು ನಿವಾರಕ ಚುಚ್ಚುಮದ್ದು ಹಾಕಿಸಿಕೊಂಡಿದ್ದಲ್ಲಿ.
?ಹೃದಯ ರೋಗ, ಹೈಪರ್ ಟೆನ್ಷನ್, ಮೂರ್ಛೆ ರೋಗ, ಡಯಾಬಿಟಿಸ್, ಕ್ಯಾನ್ಸರ್, ಕ್ರೊನಿಕ್ ಕಿಡ್ನಿ ಅಥವಾ ಲಿವರ್ ಡಿಸೀಸ್, ರಕ್ತ ಸೋರುವಿಕೆ, ಗುಪ್ತ ರೋಗ ಮುಂತಾದ ರೋಗಗಳಿಂದ ಬಳಲುತ್ತಿದ್ದಲ್ಲಿ.
?ಕಳೆದ 6 ತಿಂಗಳಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಲ್ಲಿ.
?ಕಳೆದ 6 ತಿಂಗಳಲ್ಲಿ ಗರ್ಭಪಾತವಾಗಿದ್ದಲ್ಲಿ ಅಥವಾ ಗರ್ಭವತಿಯಾಗಿದ್ದಲ್ಲಿ/ ಕಳೆದ ಒಂದು ವರ್ಷದಿಂದ ಹಾಲುಣಿಸುತ್ತಿದ್ದಲ್ಲಿ.
?ಕಳೆದ ಬಾರಿ ರಕ್ತದಾನ ಮಾಡುವಾಗ ಮೂರ್ಛೆ ಹೋಗಿದ್ದಲ್ಲಿ.
?ನಿಯಮಿತವಾಗಿ ರಕ್ತ ಉತ್ಪನ್ನಗಳ ಚಿಕಿತ್ಸೆಗೆ ಒಳಗಾಗಿದ್ದಲ್ಲಿ.
?ಒಬ್ಬರು ಉಪಯೋಗಿಸಿದ ಸೂಜಿಯನ್ನು ಬಳಸುವುದು/ಮಾದಕ ವಸ್ತುಗಳನ್ನುಉಪಯೋಗಿಸುವ ಹವ್ಯಾಸದವರಾಗಿದ್ದಲ್ಲಿ.
?ಒಬ್ಬರಿಗಿಂತ ಹೆಚ್ಚು ಮಂದಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದು.
?ವಾಣಿಜ್ಯ ಲೈಂಗಿಕ ಕಾರ್ಯಕರ್ತೆಯರಾಗಿದ್ದಲ್ಲಿ.
? ಹೆಚ್.ಐ.ವಿ. ಪಾಸಿಟಿವ್ ಆಗಿದ್ದಲ್ಲಿ.

ನಮ್ಮ ರಕ್ತದಾನದ ಕಾರಣದಿಂದ ಒಂದು ಜೀವ ಬದುಕುಳಿದರೆ ಅವರ ಪ್ರಾರ್ಥನೆಯ ಫಲದಿಂದ ನಮ್ಮ ದೇಹಕ್ಕೆ ಉಂಟಾಗುವ ಅಪಾಯದಿಂದ ಪಾರಾಗಬಹುದು.
ಬನ್ನಿ ಸ್ವ ಇಚ್ಛೆಯಿಂದ ರಕ್ತದಾನ ಮಾಡಿ ಈ ಶಿಬಿರದ ಯಶಸ್ವಿಗೆ ಕಾರಣರಾಗಿ.

ವರದಿ: ಬ್ಲಡ್ ಡೋನರ್ಸ್ ಮಂಗಳೂರು

Facebook Comments
Click to comment

Leave a Reply

Your email address will not be published. Required fields are marked *

Most Popular

Endultra Technologyt Advertisement
To Top
WhatsApp Join WhatsApp Group