Home Articles ಗಲಭೆ, ದ್ವೇಷ, ಯುದ್ದ , ಮೌಢ್ಯ ಮುಂತಾದವುಗಳು ಪ್ರಭುತ್ವ ಕ್ಕೆ ಅನಿವಾರ್ಯವಾದರೂ ಪ್ರಜೆಗಳಿಗೆ ಉತ್ತಮ...

ಗಲಭೆ, ದ್ವೇಷ, ಯುದ್ದ , ಮೌಢ್ಯ ಮುಂತಾದವುಗಳು ಪ್ರಭುತ್ವ ಕ್ಕೆ ಅನಿವಾರ್ಯವಾದರೂ ಪ್ರಜೆಗಳಿಗೆ ಉತ್ತಮ ಶಿಕ್ಷಣವೇ ಮುಖ್ಯ! :ಜುಮಾ ಭಾಷಣದಲ್ಲಿ ಯಸ್. ಬಿ ದಾರಿಮಿ

212
0
SHARE

ಪುತ್ತೂರು5: ಒಂದು ನಾಡಿನ ಸುಭಿಕ್ಷೆ ಮತ್ತು ಪ್ರಗತಿಯು ಅಲ್ಲಿನ ಜನರ ಸಾತ್ವಿಕ ಜ್ಞಾನ ಮತ್ತು ಶಿಕ್ಷಣಕ್ಕೆ ಹೊಂದಿ ಕೊಂಡಿದ್ದು ವಿದ್ಯೆ ಮತ್ತು ದೇವ ಭಯ ಇಲ್ಲದ ಸಂಪತ್ತು ಕೆಲವೊಮ್ಮೆ ಆಪತ್ತಾಗಿ ಮಾರ್ಪಡುವ ಸಾಧ್ಯತೆಯಿದೆ.ಇದಕ್ಕೆ ಇಂದಿನ ಗಲ್ಫ್ ರಾಷ್ರಗಳೇ ಉತ್ತಮ ಉದಾಹರಣೆ .ಸಾತ್ವಿಕ ವಿದ್ಯೆಯನ್ನು ಇಸ್ಲಾಂ ದರ್ಮವು ಒಂದು ಶಾಸ್ವತ ಸೊತ್ತಾಗಿ ಪರಿಗಣಿಸಿದ್ದು ಆರ್ಥಿಕ ಸಂಪತ್ತನ್ನು ಬರೀ ಇಹ ಲೋಕದ ಕ್ಷಣಿಕ ಸೊತ್ತೆಂಬುದಾಗಿ ಪರಿಚಯಿಸಿದೆ . ಒಂದು ರಾಷ್ಟವು ಎಲ್ಲಾ ಅರ್ಥದಲ್ಲಿಯೂ ಮುಂದುವರಿಯಬೇಕಾದರೆ ಅಲ್ಲಿ ಶಾಂತಿಯ ವಾತಾವರಣ ನೆಲೆ ಗೊಳ್ಳಬೇಕಾಗಿದ್ದು ಅಗತ್ಯವಾಗಿದೆ.ಭಾರತದಂತಹ ವೈವಿಧ್ಯಮಯ ರಾಷ್ಟ್ರದಲ್ಲಿ ಇದು ಹೆಚ್ಚು ಪ್ರಸ್ತುತವೆನಿಸಿದ್ದು ದುರಂತವೇನೆಂದರೆ ಇಲ್ಲಿನ ಪ್ರಭುತ್ವದವರು ಜನರಲ್ಲಿ ದ್ವೇಷ ಮೌಢ್ಯ ಗಲಭೆಗಳನ್ನು ಬಿತ್ತಿ ಪ್ರಜೆಗಳನ್ನು ಕತ್ತಲಲ್ಲಿಟ್ಟು ತಮ್ಮ ಬೇಳೆ ಬೇಯಿಸಿ ಕೊಳ್ಳುವಲ್ಲಿ ಮಗ್ನರಾಗಿದ್ದಾರೆ. ಅದು ಮಾತ್ರವಲ್ಲದೆ ಜನರಲ್ಲಿ ಪ್ರಜ್ಞಾವಂತಿಕೆ ಮೂಡುವುದನ್ನು ಇಂತಹ ಅಧಿಕಾರಸ್ಥರು ಬಯಸುವುದಿಲ್ಲ.ಆದ್ದರಿಂದ ಪ್ರಬುದ್ಧ ನಾಗರಿಕರು ಇವರ ವಂಚನೆಗೆ ಬಲಿಯಾಗದೆ ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲ ಗೊಳಿಸುವ ನಿಟ್ಟಿನಲ್ಲಿ ಧಾರ್ಮಿಕ ಮತ್ತು ಲೌಕಿಕ ವಿದ್ಯೆ ನೀಡಿ ನಾಡಿನ ಉತ್ತಮ ಪ್ರಜೆಗಳಾಗಿ ರೂಪಿಸಲು ಪ್ರಯತ್ನ ಪಡಬೇಕಾಗಿದೆ ಎಂದು ಪುತ್ತೂರು ಬದ್ರಿಯಾ ಮಸೀದಿಯ ಖತೀಬರಾದ ಹಾಜಿ ಯಸ್ ಬಿ ದಾರಿಮಿ ಅಭಿಪ್ರಾಯ ಪಟ್ಟಿದ್ದಾರೆ. ನಮ್ಮ ಮಕ್ಕಳ ವಿದ್ಯೆಗಾಗಿ ಸಾವಿರಾರು ಖರ್ಚು ಮಾಡುತ್ತಿರುವ ಹೆತ್ತವರು ಮಕ್ಕಳು ದಾರಿ ತಪ್ಪದಂತೆ ನೋಡಿ ಕೊಳ್ಲಬೇಕಾದ ಜವಬ್ದಾರಿಯನ್ನೂ ಹೊತ್ತು ಕೊಳ್ಳಬೇಕಾಗಿದೆ ಎಂದ ಖತೀಬ ಮಕ್ಕಳಿಗೆ ಮುಂದಿನ ಪರೀಕ್ಷೆ ಯ ಕಾಲದಲ್ಲಿ ಹೆಚ್ಚು ಭಾರವಾಗದಿರಲು ಈಗಲೇ ಅದಕ್ಕೆ ಸಿದ್ದಾರಾಗುವಂತೆ ನೋಡಿ ಕೊಳ್ಳಬೇಕಾಗಿದೆ .ಈ ನಿಟ್ಟಿನಲ್ಲಿ ಮುಂದಿನ ಎರಡು ತಿಂಗಳು ಮಕ್ಕಳಿಗೆ ಅಮೂಲ್ಯವಾಗಿದೆ .ಮದುವೆ ಮುಂಜಿ ಯ ಸೀಝನ್ ಆಗಿರುವುದರಿಂದ ಮಹಿಳೆಯರು ಸುತ್ತಾಡುವ ಕಡೆಗೆಲ್ಲಾ ಮಕ್ಕಳನ್ನೂ ಜೊತೆ ಸೇರಿಸಿ ಅವರ ವಿದ್ಯೆಗೆ ತೊಡಕಾಗುವಂತೆ ಮಾಡಬಾರದು ಎಂದು ಎಚ್ಚರಿಸಿದರು .ಮುಸ್ಲಿಮರ ಬಗ್ಗೆ ಹೇಳುವುದಾದರೆ ಮಾನವನಿಗೆ ಫಲ ಪ್ರದವಾಗುವ ಯಾವುದೇ ವಿದ್ಯೆ ಯನ್ನು ಅವರು ಸಂಪಾದಿಸ ಬೇಕೆಂದು ಇಸ್ಲಾಂ ಉತ್ತೇಜಿಸಿದೆ.ಎಷ್ಟರ ವರೆಗೆ ಎಂದರೆ ಈಜು ಕಲಿಯುವುದು ಕೂಡಾ “ಸುನ್ನತ್ ” ಆದ ಪುಣ್ಯ ಕರ್ಮವೆಂದು ಪ್ರವಾದಿ ಸ ಅ ಕಲಿಸಿದ್ದಾರೆ.ಅದಿಪಿತ ಆದಂ ನೆಬಿಯವರು ಮಲಾಹಿಕತ್ ಎಂಬ ದೇವಚರರಿರಿಗೆ ಸರ್ವ ಭಾಷೆಗಳನ್ನು ಕಲಿಸಿದ ಕಾರಣಕ್ಕೆ ಅವರ ಮುಂದೆ ಸಾಷ್ಟಾಂಗ ಎರಗಲು ಅಲ್ಲಾಹು ಆದೇಶಿಸಿದ ಘಟನೆ ಕುರ್ಆನ್ ಉಲ್ಲೇಖ ಗೊಂಡಿದೆ.ಅಷ್ಟೇ ಯಾಕೆ? ನಮ್ಮ ಮದ್ಹಬ್ ನ ಇಮಾಮ್ ಶಾಫಿ ರ ಯವರು ನಾಯಿಗೆ ಪ್ರಾಯ ಪೂರ್ತಿ ಯಾಗುವ ಬಗ್ಗೆ ಕಲಿಸಿದ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಕಂಡರೆ ಎದ್ದು ನಿಂತು ಗೌರವ ಸಲ್ಲಿಸುತ್ತಿದ್ದರು ಎಂದು ವಿವರಿಸಿದ ದಾರಿಮಿಯವರು ಅಜ್ಞಾನ ಎಂಬುವುದು ಮಾನವನ ಶತ್ರುವಾಗಿದ್ದು ಅದರಿಂದಲೇ ದ್ವೇಷ,ಮೌಢ್ಯ ಬೆಳೆಯುತ್ತದೆ ಎಂದು ಸ್ಪಷ್ಟ ಪಡಿಸಿದರು. ಇದಕ್ಕೆ ಉದಾಹರಣೆಯಾಗಿ ವ್ಯಕ್ತಿಯೊಬ್ಬರು ತನ್ನ ಮಗಳಿಗೆ ಬಂದಿದ್ದ ಹಲವು ಸಂಬಂಧವನ್ನು ತಾವು ಗೌರವಿಸುವ ಅವರ ಆದ್ಯಾತ್ಮಿಕ ವ್ಯಕ್ತಿ ಯೊಬ್ಬರ ಬಳಿ ಹೇಳಿ ಕೊಂಡಾಗ ಅದೆಲ್ಲವನ್ನೂ ಆ ವ್ಯಕ್ತಿ ವಿವಿಧ ಕಾರಣಗಳು ಹೇಳಿ ತಡೆದಿದ್ದು ಈಗ ಆ ಹೆಣ್ಣು ಮಗಳಿಗೆ ಇಪ್ಪತ್ತೆಂಟು ವರ್ಷ ದಾಟಿದ ಒಂದು ಪ್ರಕರಣವನ್ನು ಉಲ್ಲೇಖಿಸಿದರು. ಆದ್ಯಾತ್ಮಿಕತೆಯ ನೆಪದಲ್ಲಿ ಇಂತಹ ಘಟನೆಗಳು ಇಂದಿಗೂ ಅಲ್ಲಲ್ಲಿ ಮರುಕಳಿಸುತ್ತಿದ್ದು ಇದು ಧಾರ್ಮಿಕ ಮತ್ತು ಲೌಕಿಕ ಜ್ಞಾನದ ಕೊರತೆಯಿಂದಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ವರದಿ: ಮುಹಮ್ಮದ್ ಇಲ್ಯಾಸ್

Facebook Comments

LEAVE A REPLY

Please enter your comment!
Please enter your name here