ಅ14: ವಿವಾಹಕ್ಕೆ ಮುನ್ನ ಪದವಿ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸುವ ಮುಸ್ಲಿಂ ಯುವತಿಯರು ಇನ್ನು ಮುಂದೆ ಕೇಂದ್ರ ಸರಕಾರದಿಂದ 51,000 ರೂ. ನಗದು ಬಹುಮಾನ ಪಡೆಯಲಿದ್ದಾರೆ. ಅಲ್ಪಸಂಖ್ಯಾತರನ್ನು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ‘ಶಾದಿ ಶಾಗುನ್’ ಹೆಸರಿನ ಈ ಯೋಜನೆಗೆ ಅಲ್ಪಸಂಖ್ಯಾತ ಸಚಿವಾಲಯ ಅನುಮೋದನೆ ನೀಡಿದೆ.
ಮೌಲಾನಾ ಆಜಾದ್ ಶಿಕ್ಷಣ ಪ್ರತಿಷ್ಠಾನವು ಇಂಥದ್ದೊಂದು ಪ್ರಸ್ತಾವವನ್ನು ಕಳೆದ ಜುಲೈನಲ್ಲಿ ಅಲ್ಪಸಂಖ್ಯಾತ ಖಾತೆ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಮುಂದಿರಿಸಿತ್ತು. ಮೌಲಾನಾ ಆಜಾದ್ ಪ್ರತಿಷ್ಠಾನ ನೀಡುವ ಬೇಗಮ್ ಹಜ್ರತ್ ಮಹಲ್ ವಿದ್ಯಾರ್ಥಿವೇತನ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿನಿಯರೂ ಈ ನೂತನ ಯೋಜನೆಗೆ ಅರ್ಹರಾಗಿರುತ್ತಾರೆ. ‘ಶಾದಿ ಶಾಗುನ್ ಅರ್ಹತೆಯ ಮಾನದಂಡಗಳನ್ನು ತಿಳಿಸುವ ವೆಬ್ ತಾಣವನ್ನೂ ಪ್ರತಿಷ್ಠಾನವು ಸಿದ್ಧಪಡಿಸುತ್ತಿದೆ.
Facebook Comments