Endultra Technologyt Advertisement
Karnataka

ಮಂಗಳೂರು: ವೆಲ್ಪೇರ್ ಸೇವ ಮತ್ತು ಮಾಹಿತಿ ಕೇಂದ್ರ ಉದ್ಘಾಟನೆ –

ಮಂಗಳೂರು: ವೆಲ್ಪೇರ್ ಸೇವ ಮತ್ತು ಮಾಹಿತಿ ಕೇಂದ್ರ ಉದ್ಘಾಟನೆ

Welfare Party Inaugurates Information & Service Center in Mangalore

ಮಂಗಳೂರು: ವೆಲ್ಫೇರ್ ಪಾಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಘಟಕದ ವತಿಯಿಂದ, ಸರಕಾರಿ ಯೋಜನೆಗಳ ಮಾಹಿತಿಗಳನ್ನು ಜನರಿಗೆ ತಿಳಿಸುವ ಮತ್ತು ಆನ್‍ಲೈನ್ ಸೇವೆಯನ್ನು ಮಾಡಿ ಕೊಡುವ ನಿಟ್ಟಿನಲ್ಲಿ ಸೆಪ್ಟೆಂಬರ್ 7ರಂದು ಜಿಲ್ಲಾ ಕಚೇರಿಯಲ್ಲಿ “WELFARE ಸೇವಾ ಮತ್ತು ಮಾಹಿತಿ ಕೇಂದ್ರ”ವನ್ನು ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲಿಯಾನ್‍ರಿಂದ ಉದ್ಘಾಟಿಸಲಾಯಿತು.

ಬಳಿಕ ಪಕ್ಷದ ಜಿಲ್ಲಾಧ್ಯಕ್ಷ ಮೊಯಿನ್ ಕಮರ್ ಮಾತನಾಡುತ್ತಾ: “ಸರಕಾರಿ ಯೋಜನೆಗಳ ಉಪಯುಕ್ತವಾಗುವ ಮಾಹಿತಿ ಮತ್ತು ಸೇವೆಯನ್ನು ಜನರ ಬಳಿಗೆ ಹೋಗಿ ತಲುಪಿಸುವುದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಆಡಳಿತ ಪಕ್ಷಗಳ ನಿರ್ಲಕ್ಷ್ಯದಿಂದಾಗಿ ಇವರೆಲ್ಲಾ ತಮ್ಮ ಕ್ಯಾಬಿನ್‍ಗೆ ಮಾತ್ರ ಸೀಮಿತಗೊಂಡಿದ್ದಾರೆ. ಅದೇ ರೀತಿ ಆಡಳಿತದಲ್ಲಿರುವ ಪಕ್ಷದ ಸದಸ್ಯರು ಜನರಿಗೆ ಇಂತಹ ಕಾರ್ಯಗಳನ್ನು ಮಾಡಿಕೊಡುವುದರಲ್ಲಿ ಮೊದಲಿಗರಾಗಬೇಕಿತ್ತು. ಅವರು ಕೂಡಾ ತಮಗೆ ರಾಜಕೀಯ ಲಾಭ ಇರುವ ಕಡೆ ತಲೆ ತೂರಿಸಿ ಬಳಿಕ ಮಾಯವಾಗುತ್ತಾರೆ. ವೆಲ್ಫೇರ್ ಪಾರ್ಟಿಯ ನಿಷ್ಠಾವಂತ ಮತ್ತು ನಿಷ್ಕಳಂಕ ಹೊಣೆಗಾರರು ಹಾಗೂ ಸದಸ್ಯರು ಸರಕಾರೀ ಯೋಜನೆಗಳನ್ನು ಜನರಿಗೆ ಮರುಭೂಮಿಯಲ್ಲಿನ ಓಯಸಿಸ್‍ನಂತೆ ತಲುಪಿಸಲು ಉತ್ಸುಕರಾಗಿದ್ದಾರೆ. ಇದು ಜನರಿಗೆ ಸರಕಾರದ ಸೌಲಭ್ಯಗಳು ದೊರಕುವ ನಿಟ್ಟಿನಲ್ಲಿ ಮಹತ್ವದ ಕೆಲಸವಾಗಲಿದೆ ಎಂದು ಪಕ್ಷವು ನಂಬಿದೆ” ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಸಮಾಜ ಸೇವಾ ಘಟಕದಲ್ಲಿ ಸೇವೆಯನ್ನು ಮಾಡುತ್ತಿದ್ದ ಇರ್ಷಾದ್ ವೇಣೂರು ವಿಷಯವನ್ನು ವಿವರಿಸುತ್ತಾ: “ಈ ಫೀಲ್ಡಲ್ಲಿ ನನ್ನ ಕೆಲವು ವರ್ಷದ ಅನುಭವದ ಪ್ರಕಾರ ನಾವು ಸರಕಾರಿ ಅಧಿಕಾರಿಗಳು ಮತ್ತು ಕರ್ಮಚಾರಿಗಳನ್ನು ಅಸಮರ್ಥವಾಗಿ ಕಂಡಾಗ ಪ್ರಶ್ನಿಸುವವರಾಗಬೇಕು. ಆಗ ಅದಿಕಾರಿಗಳು ತನ್ನಿಂತಾನೆ ಜಾಗರೂಕ ರಾಗಿರುತ್ತಾರೆ. ಈ ನಿಟ್ಟಿನಲ್ಲಿ ವೆಲ್ಫೇರ್ ಪಾರ್ಟಿ ಕೈಗೊಂಡ ಈ ಯೋಜನೆಯು ಜನರಿಗೆ ಪ್ರಯೋಜನಕಾರಿ ಯಾಗಲಿ ಎಂದು ಆಶಿಸುತ್ತೇನೆ” ಎಂದರು.

ವೇದಿಕೆಯಲ್ಲಿ ಆಯಿಶಾ ಎಜುಕೇಶನ್ ಆತೂರು ಇದರ ಸ್ಥಾಪಕಾಧ್ಯಕ್ಷ ಹಾಗೂ ನಿರ್ದೇಶಕರಾದ ಅಮೀನ್ ಅಹ್ಸನ್ ಉಪಸ್ಥಿತರಿದ್ದು, ಸಾಂದರ್ಭಿಕವಾಗಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಶಾಕಿರ್ ಅಹಮದ್ ಉಪಸ್ಥಿತರಿದ್ದರು. ಪಕ್ಷದ ಸೈದ್ಧಾಂತಿಕ ತರಬೇತುದಾರ ನೂರುಲ್ ಅಮೀನ್ ಧನ್ಯವಾದ ನುಡಿಗಳನ್ನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರಫಾ ಮಂಚಿಯವರು ಪ್ರಾಸ್ತಾವಿಕ ಮಾತನಾಡುತ್ತಾ ಕಾರ್ಯಕ್ರಮವನ್ನು ನಿರೂಪಿಸಿದರು.

Facebook Comments
Click to comment

Leave a Reply

Your email address will not be published. Required fields are marked *

Most Popular

Endultra Technologyt Advertisement
To Top
WhatsApp Join WhatsApp Group