Endultra Technologyt Advertisement
Education

ಮಂಗಳೂರು: ಕಾಲೇಜಿನ ಮೂರು ವಿದ್ಯಾರ್ಥಿಗಳು ನೀರು ಪಾಲು

ಕಾಲೇಜಿನ ಮೂರು ವಿದ್ಯಾರ್ಥಿಗಳು ನೀರು ಪಾಲು

ಮಂಗಳೂರು: ಸೆ.4: ಸ್ನಾನಕ್ಕೆಂದು ನೇತ್ರಾವತಿ ನದಿಗಿಳಿದ ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಇನೋಳಿ ನಡುಗುಡ್ಡೆ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ನೀರುಪಾಲಾದವರನ್ನು ವಳಚ್ಚಿಲ್‌ನ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳಾದ ಚಿತ್ರದುರ್ಗ ಮೂಲದ ಶ್ರೀರಾಮ್(21), ವಿಖಿಲ್(22) ಹಾಗೂ ಬಿಹಾರ ಮೂಲದ ಶುಭಂ(21) ಎಂದು ಗುರುತಿಸಲಾಗಿದೆ. ಈ ಪೈಕಿ ವಿಖಿಲ್ ಅವರ ಮೃತದೇಹ ಪತ್ತೆಯಾಗಿದೆ. ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನ ಎಂಟು ವಿದ್ಯಾರ್ಥಿಗಳು ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದರು. ಇವರು ಸ್ನಾನ ಮುಗಿಸಿ ಹಿಂದಿರುಗಬೇಕು ಅನ್ನುವಷ್ಟರಲ್ಲಿ ಶ್ರೀರಾಮ್ ಕಾಲು ಜಾರಿ ನದಿಗೆ ಬಿದ್ದರೆನ್ನಲಾಗಿದೆ. ಶ್ರೀರಾಮ್ ಅವರನ್ನು ರಕ್ಷಿಸಲು ಮುಂದಾಗ ವಿಖಿಲ್ ಮತ್ತು ಶುಭಂ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋದರೆನ್ನಲಾಗಿದೆ. ಉಳಿದ ಐವರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಘಟನಾ ಸ್ಥಳಕ್ಕೆ ಕೊಣಾಜೆ ಠಾಣಾ ಪೊಲೀಸರು ತೆರಳಿದ್ದು, ಶೋಧ ಕಾರ್ಯ ಮುಂದುವರಿದಿದೆ.

Facebook Comments
Click to comment

Leave a Reply

Your email address will not be published. Required fields are marked *

Most Popular

Endultra Technologyt Advertisement
To Top
WhatsApp Join WhatsApp Group