Endultra Technologyt Advertisement
Corruption

ದಲಿತ ಮತ್ತು ಮುಸ್ಲಿಮರ ಸಂಘಟಿತ ಹೋರಾಟದಿಂದ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾದ್ಯ – ಜಿಗ್ನೇಶ್ ಮೇವಾನಿ

ದಲಿತ ಮತ್ತು ಮುಸ್ಲಿಮರ ಸಂಘಟಿತ ಹೋರಾಟದಿಂದ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾದ್ಯ – ಜಿಗ್ನೇಶ್ ಮೇವಾನಿ

Jignesh Mewani- With the struggle of Muslims and Dalits together, we can claim our rights

ಆಗಸ್ಟ್ 20, ಬೆಂಗಳೂರು: ನಗರದ ಫ್ರೀಡಂ ಪಾರ್ಕ್‍ನಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಲಿತಪರ ಹೋರಟಗಾರ ಗುಜರಾತಿನ ಜಿಗ್ನೇಶ್ ಮೇವಾನಿಯವರು ಭೂಮಿ ಮತ್ತು ವಸತಿ ಹಕ್ಕು ಕೇವಲ ಕರ್ನಾಟಕದ ಸಮಸ್ಯೆಯಲ್ಲ ಇದು ದೇಶದ ಸವiಸ್ಯೆಯಾಗಿರುತ್ತದೆ. ಬಿಜೆಪಿ ಆಳ್ವಿಕೆ ಮಾಡುವ ರಾಜ್ಯಗಳಲ್ಲಿ, ಕಮ್ಯುನಿಷ್ಟರು ಆಳ್ವಿಕೆ ಮಾಡುವ ಕೇರಳದಲ್ಲಿ ಮತ್ತು ಕಾಂಗ್ರೆಸ್ ಆಳ್ವಿಕೆ ಮಾಡುತ್ತಿರುವ ರಾಜ್ಯಗಳಲ್ಲಿ ಬಡಜನರಿಗೆ ಭೂಮಿ ಕೊಡಲು ಹಿಂಜರಿಯುತ್ತಿರುವ ಸರಕಾರಗಳು ಯಾವುದೇ ಅಡೆತಡೆಗಳಿಲ್ಲದೆ ಕಾರ್ಪೊರೇಟ್ ಕುಲಗಳಿಗೆ ಭೂಮಿಯನ್ನು ನೀಡುತ್ತಿರುವುದು ಈ ದೇಶದ ದುರಂತ ಎನ್ನಬಹುದು. ಈ ದೇಶದಲ್ಲಿ ಕೇವಲ ಭೂಮಿ ಮತ್ತು ವಸತಿ ಹಕ್ಕಿನ ಸಮಸ್ಯೆಗಳಲ್ಲದೆ ಇನ್ನೂ ಹಲವಾರು ರೀತಿಯ ಶೋಷಣೆಗಳು ಪ್ರಚಲಿತದಲ್ಲಿದೆ. ಈ ಶೋಷಣೆಗಳನ್ನು ಕೊನೆಗೊಳಿಸಬೇಕಾದರೆ ದಲಿತರು ಮತ್ತು ಮುಸಲ್ಮಾನರ ಸಂಘಟಿತ ಹೋರಾಟದ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಆದಿವಾಸಿ ಜನಾಂಗದ ಒಕ್ಕೂಟದ ರಾಷ್ಟ್ರೀಯಾಧ್ಯಕ್ಷೆ ಮಧ್ಯಪ್ರದೇಶದ ಮಾಧುರಿಯವರು ಮಾತನಾಡಿ ಈ ಹೋರಾಟವು ಅರ್ಥಪೂರ್ಣವಾಗಿದೆ ಈ ದೇಶದಲ್ಲಿ ಅಭಿವೃದ್ಧಿಯ ನೆಪದಲ್ಲಿ ಶೇ. 40ಕ್ಕಿಂತಲೂ ಹೆಚ್ಚು ಭೂಮಿಯನ್ನು ಕಸಿದುಕೊಳ್ಳುತ್ತಿರುವ ಸರಕಾರಗಳು ಜನಸಮಾನ್ಯರಿಗೆ ಒಂದು ಸೂರಿನ ವ್ಯವಸ್ಥೆ ಮಾಡದಿರುವುದು ವಿಷಾದನೀಯ ಎಂದರು. ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿಯವರು ಮಾತನಾಡುತ್ತಾ ನಮ್ಮ ಹೋರಾಟವು ಯಶಸ್ವಿಯಾಗುವ ಮುನ್ಸೂಚನೆಗಳು ಕಾಣುತ್ತಿದೆ. ಆನೆಕಲ್ ಪ್ರದೇಶದ ಬಡವರಿಗೆ ಭೂ ಮಂಜೂರಾತಿ ಪತ್ರವು ಸದ್ಯದಲ್ಲೇ ಕೈಸೇರುವ ಪ್ರಕ್ರಿಯೆಗಳು ಅತ್ಯಂತ ವೇಗವಾಗಿ ನಡೆಯಿತ್ತಿವೆ ಹಾಗೆಯೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಭೂಮಿ ಮತ್ತು ವಸತಿ ಹಕ್ಕಿನ ಬಗ್ಗೆ ಚರ್ಚೆ ನಡೆಸಲು ನಮ್ಮನ್ನು ನಾಳೆ ಆಹ್ವಾನಿಸಿರುತ್ತಾರೆ. ಅಲ್ಲಿ ನಮಗೆ ಪೂರಕವಾದ ಅಂಶಗಳು ತೀರ್ಮಾನಕ್ಕೆ ಬಂದರೆ ವಿಜಯೋತ್ಸವವನ್ನು ಆಚರಿಸೋಣ ಒಂದು ವೇಳೆ ನಮ್ಮ ಉದ್ದೇಶಗಳು ಈಡೇರುವ ಲಕ್ಷಣಗಳು ಕಾಣದಿದ್ದರೆ ಮತ್ತೆ ಹೋರಾಟಕ್ಕೆ ಮುನ್ನುಗ್ಗೋಣ ಎಂದು ಅವರು ಕರೆನೀಡಿದರು. ಯಾವುದೇ ಕಾರಣಕ್ಕೂ ಜನಸಾಮಾನ್ಯರಿಗೆ ಭೂಮಿ ಮತ್ತು ವಸತಿಯ ಹಕ್ಕು ಸಿಗುವವರೆಗೆ ನಮ್ಮ ಹೋರಾಟವು ವಿರಮಿಸದು ಎಂದು ಅವರು ಸರಕಾರವನ್ನು ಎಚ್ಚರಿಸಿದರು. ಹೋರಾಟ ಸಮಿತಿಯ ರಾಜ್ಯ ಸಂಚಾಲಕರಾದ ಸಿರಿಮನೆ ನಾಗರಾಜ್, ಜಿಲ್ಲಾ ಸಂಚಾಲಕರಾದ ಮರಿಯಪ್ಪ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು, ದಲಿತ ಮುಖಂಡರು, ರೈತ ಮುಖಂಡರು, ಸಮಾಜವಾದಿ ಪಕ್ಷ ಮತ್ತು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಮಾವೇಶಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದು ಪಕ್ಷದ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪಕ್ಷದ ಪ್ರತಿನಿಧಿಯಾಗಿ ರಾಜ್ಯ ಕಾರ್ಯದರ್ಶಿಯಾದ ರಿಯಾಝ್ ಫರಂಗಿಪೇಟೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾವೇಶಕ್ಕೂ ಮುನ್ನ ನಗರದ ಪುರಭವನದಿಂದ ಫ್ರೀಡಂ ಪಾರ್ಕ್‍ವರೆಗೆ ಬೃಹತ್ ಜಾಥವನ್ನು ಹೋರಾಟಗಾರರ ನೇತೃತ್ವದಲ್ಲಿ ನಡೆಸಲಾಯಿತು.

Facebook Comments
Click to comment

Leave a Reply

Your email address will not be published. Required fields are marked *

Most Popular

Endultra Technologyt Advertisement
To Top
WhatsApp Join WhatsApp Group