Endultra Technologyt Advertisement
Cow Terrorism

Coming Out of Home and Repelling RSS is the real patriotism – Riyaz Farangipet

ಮನೆಯಿಂದ ಹೊರಗಡೆ ಬಂದು ಆರ್.ಎಸ್.ಎಸ್‍ನ್ನು ಹಿಮ್ಮೆಟ್ಟಿಸುವುದೇ ನಿಜವಾದ ದೇಶಪ್ರೇಮ – ರಿಯಾಝ್ ಫರಂಗಿಪೇಟೆ

Coming Out of Home and Repelling RSS is the real patriotism – Riyaz Farangipet 

ತುಮಕೂರು: ಆ,20: ಸೋಶಿಯಲ್ ಡೆಮಾಕ್ರ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷವು ದೇಶದಾದ್ಯಂತ ನಡೆಸುತ್ತಿರುವ ಜನತೆಯ ಅಭಿಯಾನದ ಭಾಗವಾಗಿ ನಗರದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿಯಾದ ರಿಯಾಝ್ ಫರಂಗಿಪೇಟೆಯವರು ಮಾತನಾಡುತ್ತಾ ದೇಶದಲ್ಲಿ ಗೋವಿನ ಹೆಸರಿನಲ್ಲಿ ನಡೆಸುತ್ತಿರುವ ಹಿಂಸಾ ಹತ್ಯೆಗಳು ವ್ಯಾಪಕವಾಗಿದ್ದು ಒಂದು ವರದಿಯ ಪ್ರಕಾರ ಇದುವರೆಗೆ 39 ಮಂದಿಯನ್ನು ಹತ್ಯೆಮಾಡಲಾಗಿದ್ದು ದಿನಂಪ್ರತಿ 10 ಮಂದಿಯ ಮೇಲೆ ಗೋವಿನ ಹೆಸರಿನಲ್ಲಿ ಹಲ್ಲೆ ನಡೆಯುತ್ತಿದೆ ಎಂದರು. ಈ ಗುಂಪು ಹಿಂಸಾ ಹತ್ಯೆಗಳ ರುವಾರಿ ಆರ್.ಎಸ್.ಎಸ್ ಮತ್ತು ಅದರ ಸಹಭಾಗಿ ಸಂಘಟನೆಗಳಾಗಿರುತ್ತದೆ. ಆರ್.ಎಸ್.ಎಸ್‍ನ ಮೂಲ ಸಿದ್ಧಾಂತದಲ್ಲಿಯೇ ಮುಸ್ಲಿಂ, ಕ್ರಿಶ್ಚ್ಯನ್ ಮತ್ತು ಕಮ್ಯೂನಿಸ್ಟರನ್ನು ನಿರ್ಣಾಮ ಮಾಡುವವರೆಗೆ ಮನುಸಿದ್ಧಾಂತವನ್ನು ದೇಶದಲ್ಲಿ ಅಳವಡಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವುದರ ಭಯಾನಕ ರೂಪವನ್ನು ಇವತ್ತು ದೇಶದಲ್ಲಿ ನಾವು ಕಾಣುತ್ತಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರವನ್ನು ಬರೆದು ಕೊಟ್ಟವರು, ಗಾಂಧೀಜಿಯವರನ್ನು ಕೊಂದವರು ಮತ್ತು ತ್ರಿವರ್ಣ ಧ್ವಜವನ್ನು ಒಬ್ಬಳು ಮುಸ್ಲಿಂ ಮಹಿಳೆ ವಿನ್ಯಾಸ ಗೊಳಿಸಿದಳು ಎಂಬ ಏಕೈಕ ಕಾರಣಕ್ಕೆ ಅದನ್ನು ತಿರಸ್ಕರಿಸಿದವರು ಮತ್ತು ಸ್ವಾತಂತ್ರ್ಯೋತ್ಸವವನ್ನು ಧಿಕ್ಕರಿಸಿ ಅಖಂಡ ಭಾರತ ದಿನಾಚರಣೆಯನ್ನು ಮಾಡಿ ಧ್ವಜಾರೋಹಣ ನಡೆಸುವ ಸಂಘಪರಿವಾರವು ಈ ದೇಶಕ್ಕೆ ದೊಡ್ಡ ಶತ್ರುವಾಗಿದೆ ಮತ್ತು ಇವರು ಮಾಡುತ್ತಿರುವ ಎಲ್ಲಾ ಕೆಲಸಗಳು ಪ್ರಜಾಪ್ರಭುತ್ವ ವಿರೋಧಿ ಮತ್ತು ದೇಶದ್ರೋಹದ ಕೆಲಸಗಳಾಗಿರುತ್ತದೆ. ಆದ್ಧರಿಂದ ಭಾರತೀಯರಾದ ನಾವೆಲ್ಲರೂ ಕೂಡಾ ಜಾತಿ, ಮತ, ಭೇದ-ಭಾವ ಮರೆತು ಇವರ ವಿರುದ್ಧ ಹೋರಾಟವನ್ನು ಮಾಡಬೇಕಾಗಿದೆ. ಆದೂದರಿಂದ ನಾವೆಲ್ಲರೂ ಮನೆಯಿಂದ ಹೊರಗಡೆ ಬಂದು ಆರ್.ಎಸ್.ಎಸ್‍ನ್ನು ಹಿಮ್ಮೆಟ್ಟಿಸುವುದೇ ನಿಜವಾದ ದೇಶಪ್ರೇಮವಾಗಿರುತ್ತದೆ ಎಂದು ಅವರು ಕರೆ ನೀಡಿದರು.

ಆಗಸ್ಟ್ 25ರಂದು ರಾಜ್ಯದಾದ್ಯಂತ ನಗರದ ಪ್ರಮುಖ ಬೀದಿಗಳಲ್ಲಿ “ಮನೆಯಿಂದ ಹೊರಗೆ ಬನ್ನಿ” ಎಂಬ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕೈಜೋಡಿಸುವಂತೆ ಅವರು ಕೇಳಿಕೊಂಡರು.

ಸಮಾವೇಶದ ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾಧ್ಯಕ್ಷರಾದ ಶಬೀರ್ ಅಹಮದ್‍ರವರು ವಹಿಸಿದ್ದರು, ಮೌಲಾನ ಫೈಝುದ್ದೀನ್ ರಶಾದಿ, ಮೌಲಾನ ಖಲೀಮುಲ್ಲಾ, ವಾಸಿಂ ಬೆಂಗಳೂರು, ಡಿ.ಎಸ್.ಎಸ್‍ನ ಮುಖಂಡರು ಹಾಗೂ ಸ್ಥಳೀಯ ನಾಯಕರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Facebook Comments
Click to comment

Leave a Reply

Your email address will not be published. Required fields are marked *

Most Popular

Endultra Technologyt Advertisement
To Top
WhatsApp Join WhatsApp Group