Endultra Technologyt Advertisement
Human Rights

ಅಧ್ಯಕ್ಷರು ಮೌನ ಮುರಿಯಲಿ. ಇಲ್ಲಾಂದ್ರೆ ರಾಜಿನಾಮೆ ನೀಡಲಿ!

ಅಧ್ಯಕ್ಷರು ಮೌನ ಮುರಿಯಲಿ. ಇಲ್ಲಾಂದ್ರೆ ರಾಜಿನಾಮೆ ನೀಡಲಿ!

Nekkiladi Grama Panchayat President should Break Silence, else Submit Resignation!

ಪುತ್ತೂರು:ಪುತ್ತೂರು ತಾಲೂಕಿನ 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರತೀ ಎಸ್ ನಾಯ್ಕ ರವರು ಯಾವಾಗಲೂ ಮೌನವಾಗಿಯೇ ಇರುತ್ತಾರೆ. ಗ್ರಾಮ ಪಂಚಾಯತಿನ ಅಧೀನದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮವಾದರೂ ಅಧ್ಯಕ್ಷರು ಮಾತ್ರ ಅಲ್ಲಿ ಒಂದಕ್ಷರ ಕೂಡಾ ಮಾತಾಡುವುದಿಲ್ಲ . ಮೊನ್ನೆ ದಿನಾಂಕ 17/08/2017ರಂದು 34ನೇ ನೆಕ್ಕಿಲಾಡಿ ಗ್ರಾಮದ 2017-18 ವರ್ಷದ ಪ್ರಥಮ ಸುತ್ತಿನ ಗ್ರಾಮ ಸಭೆಯು ಪಂಚಾಯತಿನ ಸಭಾಂಗಣದಲ್ಲಿ ನಡೆಯಿತು. ನಮ್ಮ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ರತೀ ಎಸ್ ನಾಯ್ಕ ರವರೇ ಸಭಾಧ್ಯಕ್ಷರಾಗಿದ್ದರು.ಗ್ರಾಮ ಸಭೆಯಲ್ಲಿ ಸಭಾಧ್ಯಕ್ಷರು ಮಾತಾಡಬೇಕಾದದ್ದು ಅಧ್ಯಕ್ಷರ ಕರ್ತವ್ಯ. ಆದರೆ, ಅವರು ಒಂದು ಮಾತನ್ನೂ ಆಡಲಿಲ್ಲ .ಈ ಸಭೆಯಲ್ಲಿ ಉಪಾಧ್ಯಕ್ಷರು ಅಸ್ಕರ್ ಅಲಿಯವರು ಮಾತಾಡಿದಾಗ ಸಭಿಕರಲ್ಲಿ ಕೆಲವರು “ಅಧ್ಯಕ್ಷರು ಮಾತಾಡಲಿ” ಎಂದು ಹೇಳಿದಾಗ ಉಪಾಧ್ಯಕ್ಷರಿಂದ “ನಾನು ಅಧ್ಯಕ್ಷರ ಅನುಮತಿಯ ಮೇರೆಗೆ ಮಾತಾಡುತ್ತಿದ್ದೇನೆ” ಎಂಬ ಉತ್ತರ ಲಭಿಸಿತು.ಗ್ರಾಮ ಪಂಚಾಯತಿನಲ್ಲಿ ಯಾವುದೇ ನಿರ್ಣಯ ತೆಗೆದರೂ ಆ ಬಗ್ಗೆ ಒಂದಿಷ್ಟೂ ಚಿಂತಿಸದೆ ಅವರು ಸಹಿ ಹಾಕುತ್ತಾರೆಯೇ ವಿನಃ ಅದರ ಸಾಧಕ-ಬಾಧಕದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ . ಕೇವಲ ಸಹಿಗಾಗಿ ಮಾತ್ರ ಅಧ್ಯಕ್ಷ ಪೀಠದಲ್ಲಿ ಕುಳಿತುಕೊಂಡಿರುವುದಾ? ಗ್ರಾಮದ ಪ್ರಥಮ ಪ್ರಜೇಯೇ ಹೀಗಾದರೆ ನಮ್ಮ ಗ್ರಾಮ ಅಭಿವೃದ್ಧಿ ಹೊಂದುವುದಾದರೂ ಹೇಗೆ? ಗ್ರಾಮ ಪಂಚಾಯತಿಯ ಯಾವುದೇ ವಿಷಯಗಳ ಅಥವಾ ನಿರ್ಣಯಗಳ ಬಗ್ಗೆ ಅಧ್ಯಕ್ಷರಿಗೆ ಮಾಹಿತಿ ಇರುವುದಿಲ್ಲ ಇಲ್ಲಿ ಎಲ್ಲಾವು ಅಧ್ಯಕ್ಷರ ಅನುಮತಿಯ ಮೇರೆಗೆ ಉಪಾಧ್ಯಕ್ಷರೇ ಕಾರ್ಯವನ್ನು ನಿರ್ವಹಿಸುತ್ತಾರೇ.ಇದಕ್ಕಾಗಿ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ.ಅಥವಾ ಪತ್ರಿಕಾಗೋಷ್ಟಿ ಕರೆದು “ನನಗೆ ಮಾತಾಡಲು ಆಗುತ್ತಿಲ್ಲ .ನನ್ನ ಕಾರ್ಯಚಟುವಟಿಗಳನ್ನು ಉಪಾಧ್ಯಕ್ಷರಿಗೆ ಬಿಟ್ಟು ಕೊಟ್ಟಿದ್ದೇನೆ” ಎಂಬ ಹೇಳಿಕೆ ನೀಡಲಿ.

ಝಹೀರ್ ಶಾಂತಿನಗರ ಪುತ್ತೂರು
Zaheer Shantinagar Puttur

Facebook Comments
Click to comment

Leave a Reply

Your email address will not be published. Required fields are marked *

Most Popular

Endultra Technologyt Advertisement
To Top
WhatsApp Join WhatsApp Group